Skip to product information
1 of 2

Dr. K. N. Ganeshaiah

ಭಿನ್ನ ಬಿಂಬ

ಭಿನ್ನ ಬಿಂಬ

Publisher - ಅಂಕಿತ ಪುಸ್ತಕ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 99

Type - Paperback

ಕನ್ನಡ ಸಾಹಿತ್ಯಲೋಕದಲ್ಲಿ ಗಣೇಶಯ್ಯನವರದು ವಿಶಿಷ್ಟ ಹೆಸರು. ತಮ್ಮ ವೈಜ್ಞಾನಿಕ ಐತಿಹಾಸಿಕ ಕಥಾನಕಗಳ ಮೂಲಕ ಹೊಸ ಮಾರ್ಗವನ್ನು ತೆರೆದ ಪ್ರವರ್ತಕರಿವರು. ಇತಿಹಾಸವನ್ನು ವೈಜ್ಞಾನಿಕ ನೆಲೆಯಲ್ಲಿ ಅನ್ವೇಷಿಸುವ, ಹೊಸ ದೃಷ್ಟಿಕೋನದಲ್ಲಿ ನೋಡುವ ಕ್ರಮ ಇವರ ಕಥನದ ಹಿಂದಿದೆ. ಕಥೆಯನ್ನು ಕುತೂಹಲಕಾರಿಯಾಗಿ ಹೇಳುವ ಶೈಲಿ ಇವರಿಗೆ ಸಿದ್ದಿಸಿದೆ.

ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. 'ಭಿನ್ನಬಿಂಬ' ಕೃತಿಯ ಹಿನ್ನೆಲೆಯಲ್ಲಿ ಮುಖ್ಯವಾಗಿ ಕೆಲಸ ಮಾಡಿರುವುದು ಅವರ ಈ ಬಗೆಯ ಪ್ರವೃತ್ತಿಯೇ. ಜೊತೆಗೆ ಧರ್ಮ ವಿಜ್ಞಾನಗಳನ್ನು ಕುರಿತ ತೌಲನಿಕ ಚರ್ಚೆ ಇಲ್ಲಿದೆ. ಚರಿತ್ರೆಯ ವಿಸ್ಕೃತಿಯ ಪರಿಣಾಮಗಳೇನೆಂಬುದನ್ನು ಅತ್ಯಂತ ಕುತೂಹಲದ ಧಾಟಿಯಲ್ಲಿ ನಿರೂಪಿಸುವ 'ನಿಧಿಯ ಅವತರಣೆ' ಲೇಖನವಿದೆ. ಎಲ್ಲ ಲೇಖನಗಳು ಓದುಗರನ್ನು ಆಲೋಚನೆಗೆ ಹಚ್ಚುವಷ್ಟು ಪರಿಣಾಮಕಾರಿಯಾಗಿವೆ.

ವಿಜ್ಞಾನ, ಚರಿತ್ರೆ, ಧರ್ಮಗಳ ಮುಖಾಮುಖಿಯಲ್ಲಿ ತಿಳಿದುಕೊಳ್ಳಬೇಕಾದ ಸತ್ಯದ ಅನಾವರಣವನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಇಂಗ್ಲಿಷ್‌ನಲ್ಲಿ ಅನೇಕ ಸಂಶೋಧನಾ ಲೇಖನಗಳನ್ನು ಬರೆದಿರುವ ಗಣೇಶಯ್ಯ ಅವರ ಮೊದಲ ಆ ಸ್ವರೂಪದ ಕನ್ನಡದ ಕೃತಿ ಭಿನ್ನಬಿಂಬ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)