Skip to product information
1 of 2

B. R. Lakshman Rao, Edited by : H. S. Venkateshamuthy

ಹಿನ್ನೋಟದ ಕನ್ನಡಿ

ಹಿನ್ನೋಟದ ಕನ್ನಡಿ

Publisher - ಅಂಕಿತ ಪುಸ್ತಕ

Regular price Rs. 295.00
Regular price Rs. 295.00 Sale price Rs. 295.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 312

Type - Hardcover

ಬಿಆರೆಲ್ 70ರಲ್ಲೂ ಇಪ್ಪತ್ತನ್ನು ಧ್ಯಾನಿಸುತ್ತಾರೆ. ಹಾಗೆ ಧ್ಯಾನಿಸುವಲ್ಲಿ ಲೋಕಭೀತಿಯ ವೇಷಗಾರಿಕೆಯಿರುವುದಿಲ್ಲ. ದಾಟುವುದೇ ಅವರ ಕಾವ್ಯ ಮತ್ತು ಬದುಕು ಒಪ್ಪಿಕೊಂಡ ಧರ್ಮವಾದುದರಿಂದ ದಾಟಕೂಡದೆನ್ನುವ 'ನಾತಿಚರಾಮಿ' ತತ್ವವನ್ನು ಅವರು ಸಲೀಸಾಗಿ ಉಲ್ಲಂಘಿಸಬಲ್ಲರು. ಇದು ಗಂಡು ಹೆಣ್ಣಿನ ಸಂಬಂಧದಲ್ಲಿ ಮಾತ್ರ ಎಂದು ತಿಳಿಯುವ ಕಾರಣವಿಲ್ಲ. ಜಾತಿಧರ್ಮದ ಅಡ್ಡ ಬೇಲಿಯನ್ನು ಈ ಕವಿ ಮಾನ್ಯ ಮಾಡರು. ಎಡಬಲದ ಅಡ್ಡ ಗೆರೆಗಳನ್ನು ಅವರು ಒತ್ತರಿಸಿ ನುಗ್ಗಬಲ್ಲರು. ಸ್ನೇಹ ಮತ್ತು ಪ್ರೀತಿಗಾಗಿ ಹಾವಿನ ಜೋಲು ಹಗ್ಗ ಹಿಡಿದು ಅವರು ಒಲುಮೆಯ ಅಂತಃಪುರದ ಕತ್ತಲಿಗೆ ನಿರ್ಭಯದಿಂದ ದಾಟಿಕೊಳ್ಳಬಲ್ಲರು. ಸಿಂದಾಬಾದನಂತೆ ಇವರೂ ಸಹ ಹೆಗಲೇರಿದ ಮುದುಕನನ್ನು ಯಾವತ್ತೂ ಸಹಿಸಲಾರರು. ತಮ್ಮ ಕಾವ್ಯದಲ್ಲಿ ಯಾರ ಪರವಾಗಿಯೂ ಮಾತಾಡಲಾರರು. ಅವರು ಆಡುವುದು ಅವರ ಮಾತನ್ನು ಮಾತ್ರ ಆ ಮಾತು ಅಪ್ಪಟ ಪ್ರಾಮಾಣಿಕತೆಯ ಅಗ್ನಿದಿವ್ಯದಲ್ಲಿ ಸಾಗುವಂಥದ್ದು.

-ಎಚ್ ಎಸ್ ವೆಂಕಟೇಶಮೂರ್ತಿ

ಶುದ್ಧ 'ಅರ್ಬೇನ್' ಸಂವೇದನೆ ಬಿಆರೆಲ್ ಅವರದು. ಭಾಷೆಯ ಸಮಸ್ಯೆಯಿಲ್ಲ. ದ್ವಂದ್ವಗಳಿದ್ದರೂ ವಿಕ್ಷಿಪ್ತತೆಯಿಲ್ಲ. ಚಂದವಾಗಿದ್ದರೂ ಆಲಂಕಾರಿಕವಾಗಿಲ್ಲ. ಕಾಳಜಿಯಿದ್ದರೂ ಕ್ರೌರ್ಯವಿಲ್ಲ. ಮಾತುಗಳಿದ್ದರೂ ಆರ್ಭಟವಿಲ್ಲ. ವಿರೋಧವಿದ್ದರೂ ವೈರವಿಲ್ಲ. ಒಟ್ಟಾರೆಯಾಗಿ ಒಂದು ತರದ ಪಾರದರ್ಶಕತೆ ಇಲ್ಲಿ ಕಾಣಿಸುತ್ತದೆ. 

ಹೀಗೆ ಹೇಳಿದರೆ ಹೆಚ್ಚು ತೆಳುವಾಗಬಹುದೇ, ಆದ್ದರಿಂದ ಸ್ವಲ್ಪ ಕಾಠಿಣ್ಯವನ್ನು ತರೋಣ ಎನ್ನುವ ಗಾಬರಿಯಿಲ್ಲ. ಎಲಿಯೆಟ್ ಇಂಗ್ಲಿಷನ್ನು ಬಳಸುವ ಲಾಲಿತ್ಯದಲ್ಲಿ ಬಿಆರೆಲ್ ಕನ್ನಡವನ್ನು ಬಳಸುತ್ತಾರೆ. ಈ ಪಾರದರ್ಶಕತೆಯೂ ಅವರ ಅರ್ಬೇನಿಟಿಯ ಒಂದು ಗುಣ. ವ್ಯಕ್ತಿ ಮತ್ತು ಕವಿ ಒಬ್ಬನೇ ಆಗುವ ಪಾರದರ್ಶಕತೆ ಇದು.

ಕವಿ ಪ್ರಾಮಾಣಿಕನಾಗುವುದು ಈ ಪಾರದರ್ಶಕತೆಯಿಂದಲೇ, ಕವಿತೆಯ ದೃಷ್ಟಿಯಿಂದ ಇದೊಂದು ದೊಡ್ಡ ಸಾಧನೆಯೇ ಸರಿ. ಬಿ.ಆರ್.ಎಲ್. ಅವರದೇ ಗತಿಯಲ್ಲಿ ಇನ್ನಷ್ಟು ದೂರ ಸಾಗಲಿ ಎನ್ನುವುದು ಎಲ್ಲರ ಹಾರೈಕೆ.

-ಕೆ ವಿ ತಿರುಮಲೇಶ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)